Published: August 26, 2025
4
118
443

Long Thread - Kindly Read complete. ಕನ್ನಡದ ಕುಲದೇವತೆ ದೇವಿ ಭುವನೇಶ್ವರಿಯ ಕಲ್ಪನೆ ಇವತ್ತಿನದಲ್ಲ. ಧಾರ್ಮಿಕವಾಗಿ ದೇವಿಯ ಉಲ್ಲೇಖಗಳು ನೂರಾರು. ಅಂತಹ ಕೆಲವು ಉಲ್ಲೇಖಗಳು ಈ‌ ಕೆಳಗೆ ನಿಮಗಾಗಿ. ಯಾರನ್ನೋ ಹೊರಗಿಡುವುದಕ್ಕಾಗಿ ದೇವಿಯನ್ನು ನಿರ್ಮಿಸಲಾಯಿತೆಂದು ಹೇಳುವವರಿಗಾಗಿ ಈ ಸರಣಿ. ನಕಲಿಗಳು ಸಂಪೂರ್ಣ ಓದಿ. ಅ/ಅಃ

Image in tweet by Samara Veera (ಸಮರವೀರ)

ಹಿಂದೂಗಳು ನಂಬುವ ತ್ರಿಶಕ್ತಿ ದೇವತೆಗಳಲ್ಲಿ ದಶಮಹಾವಿದ್ಯೆಗಳ ಒಂದು ರೂಪವೇ ತಾಯಿ ಭುವನೇಶ್ವರಿ. ಕಾಳಿ, ತಾರಾ, ತ್ರಿಪುರ ಸುಂದರಿ,ಭುವನೇಶ್ವರಿ, ತ್ರಿಪುರ‌ಭೈರವಿ ... ಈ ರೀತಿಯಾಗಿ ಪಾರ್ವತಿಯ ಹಲವು ಅವತಾರಗಳಲ್ಲಿ ಭುವನೇಶ್ವರಿಯೂ ಒಂದು. ಆ/ಅಃ

Image in tweet by Samara Veera (ಸಮರವೀರ)

ನಕಲಿ ಹೋರಾಟಗಾರರೇ, ನಿಮಗೆ ತಾಕತ್ತಿದ್ದರೆ‌ ಇದನ್ನು ತಪ್ಪೆಂದು ತೋರಿಸಿ. ಭುವನಗಿರಿಯಲ್ಲಿರುವ ಈ ದೇವಾಲಯ ವಿಶಿಷ್ಟವಾದುದು. ನಕಲಿಗಳಿಗೆ‌ ಇದರ ಬಗ್ಗೆ ಅರಿವಿರಲಿಕ್ಕಿಲ್ಲ. ರಹಸ್ಯಮೇತದಖಿಲಂ ದೇವಾನಾಂ ಪರಮೇಶ್ವರಿ, ಪರಾಪರ‌ರಹಸ್ಯಂ ಚ ಜಗತಾಂ ಭುವನೇಶ್ವರಿ || 🙏 ಎಂದು ಅವಳನ್ನು ಸ್ತುತಿಸಲಾಗಿದೆ. ಇ/ಅಃ

Image in tweet by Samara Veera (ಸಮರವೀರ)

ಅಷ್ಟೇ ಏಕೆ ಶಕ್ತಿಯ ಆರಾಧನೆಯಲ್ಲಿ, ನವರಾತ್ರಿಯ ಪೂಜಾ ವಿಧಾನದಲ್ಲಿ ಬರುವ ಪಂಚಪಂಚಿಕಾ ಪೂಜೆಯ ಮಂತ್ರದಲ್ಲೇ ತಾಯಿ ಭುವನೇಶ್ವರಿಯ ಉಲ್ಲೇಖ‌ವಾಗಿದೆ. ಇನ್ನೇನು ಬೇಕು ನಕಲಿಗಳೆ? ಧಾರ್ಮಿಕ ಆಧಾರ ಸಾಕಲ್ಲವೆ? Read Further. ಈ/ಅಃ

Image in tweet by Samara Veera (ಸಮರವೀರ)

ವೀರಶೈವ -ಲಿಂಗಾಯತ- ಶೈವ ಸಂಪ್ರದಾಯದ ಶಿವರಹಸ್ಯ ಗ್ರಂಥದಲ್ಲಿಯೂ ಪಾರ್ವತಿಗೆ ಲಿಂಗ ಪೂಜೆಯ ಮಹತ್ವವನ್ನು ತಿಳಿಸುತ್ತ ಭುವನೇಶ್ವರಿ ಎಂದೇ ಉಲ್ಲೇಖಿಸಲಾಗಿದೆ. ಉ/ಅಃ

Image in tweet by Samara Veera (ಸಮರವೀರ)

ಡಾ.‌ಚಿದಾನಂದ ಮೂರ್ತಿಯವರ 'ಸಂಶೋಧನೆ‌' ಗ್ರಂಥದ ಭಾಗವನ್ನು‌ ನೇರವಾಗಿ ಹಾಕಿರುವೆ. ಹಂಪೆಯ ಭುವನೇಶ್ವರಿ ಆ ಭುವನಾಧೀಶನಾದ ಶಿವನ ಪತ್ನಿ ಪಾರ್ವತಿಯೇ ಎಂಬುದನ್ನು ನೇರವಾಗಿ ಉಲ್ಲೇಖಿಸಿದ್ದಾರೆ ಮೂರ್ತಿಯವರು. ಊ/ಅಃ

Image in tweet by Samara Veera (ಸಮರವೀರ)

ಅವಳೇ ಗಿರಿಜೆ, ಅವಳೇ ಪಾರ್ವತಿ, ಅವಳೇ‌ ಭುವನೇಶ್ವರಿ. ಅದೇ ರೀತಿ ಹಲವು ಶಿವನ ದೇವಾಲಯಗಳಲ್ಲಿ ಕಾಣುವ ಗೋಪರದ ರೀತಿಯ ಮೇಲ್ಛಾವಣಿಗೂ ಭುವನೇಶ್ವರಿ ಎಂದೇ ಕರೆಯುತ್ತಾರೆ. ಇದಕ್ಕೂ ಕಾರಣ ಶಿವನ ಸಾಂಗತ್ಯವೇ‌ ಎಂಬ ಉಲ್ಲೇಖವನ್ನು ಮೂರ್ತಿಗಳು ಇದರಲ್ಲಿ ಮಾಡಿದ್ದಾರೆ. ಋ/ಅಃ

Image in tweet by Samara Veera (ಸಮರವೀರ)

ಶ್ರೀದತ್ತ ದಿಕ್ಷಿತರ ಈ ಗ್ರಂಥದಲ್ಲಿ ಉಲ್ಲೇಖವಾಗಿರುವಂತೆ ತಾಂತ್ರಿಕ ಆಚರಣೆಗಳಲ್ಲಿನ ಪಾರ್ವತಿಯ ಇನ್ನೊಂದು ರೂಪವೇ ಭುವನೇಶ್ವರಿ. ಶಾಕ್ತ ಸಾಂಪ್ರದಾಯದ ಭಾಗವೂ, ಅಥರ್ವವೇದದ ಭಾಗವೂ ಆಗಿರುವ ತಾಂತ್ರಿಕ ಆಚರಣೆಗಳಿಗೆ ದಶಮಹಾ-ವಿದ್ಯಾದೇವತೆಗಳ ಪ್ರಾಮುಖ್ಯತೆ‌ ಅತೀ ಹೆಚ್ಚು. ಎ/ಅಃ

Image in tweet by Samara Veera (ಸಮರವೀರ)

ಲಲಿತೋಪಾಖ್ಯಾನಮ್ ಪುಸ್ತಕದ , ಸಿದ್ಧ ಸಾರಸ್ವತ ಸ್ತೋತ್ರದಲ್ಲಿ ಕಂಡುಬಂದ ಭುವನೇಶ್ವರಿಯ ಉಲ್ಲೇಖ. ದೇವಿಗೆ ಇಲ್ಲಿ ವೇದಗರ್ಭೈ ಎಂದು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಏ/ಅಃ

Image in tweet by Samara Veera (ಸಮರವೀರ)

ದೇವಿಯ ನಾಮಾವಳಿಗಳಲ್ಲಿ ಪದೇ ಪದೇ ಉಲ್ಲೇಖವಾಗುವ ದೇವಿ ಭುವನೇಶ್ವರಿಯ ಉಲ್ಲೇಖ ಈ ಕೆಳಗಿದೆ ನೋಡಿ. ಶ್ರೀ ಭುವನೇಶ್ವರಿ ರಾಜರಾಜೇಶ್ವರಿ ಆನಂದರೂಪಿಣಿಯೇ ನನ್ನ‌ ಪಾಲಿಸು ಎಂದು ಕೇಳಿಕೊಳ್ಳುವ ಸ್ತುತಿ. ಐ/ಅಃ

Image in tweet by Samara Veera (ಸಮರವೀರ)

ನವರಾತ್ರಿಯ ಪ್ರತಿದಿನದ ಪಾರಾಯಣದಲ್ಲೇ‌ ಭುವನೇಶ್ವರಿಯ ಉಲ್ಲೇಖವಿದೆ. 🙏 ನವಮಂಗಳ ಸ್ತೋತ್ರವನ್ನು ಈ ಕೆಳಗೆ ಕೊಟ್ಟಿದೆ ನೋಡಿ. ಭುವನೇಶ್ವರಿಗೆ ಧಾರ್ಮಿಕ ಅಸ್ತಿತ್ವವಿಲ್ಲ ಎನ್ನುವ ಎಡಗಡೆಯ ಬಾಡಿಗಳು ಇದನ್ನು ಅರ್ಥ ಮಾಡಿಕೊಳ್ಳಲು ವರ್ಷಗಳೇ ಬೇಕಾಗಬಹುದು. ಒ/ಅಃ

Image in tweet by Samara Veera (ಸಮರವೀರ)

ಕನ್ನಡವಷ್ಟೇ ಏಕೆ? ಈ ಅವಧಿಯಲ್ಲಿ ರಚಿತವಾಗಿರುವ ದುರ್ಗಾಚಾಲಿಸಾ ಎಂದೇ ಪ್ರಸಿದ್ಧವಾಗಿರುವ ೪೦ ದೇವಿ ಶ್ಲೋಕಗಳ ಸ್ತೋತ್ರದಲ್ಲೂ ದುರ್ಗೆಯ ಪ್ರತಿರೂಪವಾಗಿ ಮಾತಂಗಿ ಹಾಗೂ ಭುವನೇಶ್ವರಿಯ ಉಲ್ಲೇಖ ನಾವು ಕಾಣಬಹುದು. ಕನ್ನಡದ್ದಷ್ಟೇ‌ ಎಂದು ನಕಲಿಗಳು ಬರಬಹುದು‌ ಎಂದು ಅದಾಗಲೇ ಹಾಕಿಬಿಟ್ಟಿರುವೆ. 😭😭 ಓ/ಅಃ

Image in tweet by Samara Veera (ಸಮರವೀರ)

ಅಂಬಾ ಪರಮೇಶ್ವರಿ ಸ್ತುತಿಯಲ್ಲೂ ತಾಯಿ ಭುವನೇಶ್ವರಿಯ ಉಲ್ಲೇಖ, ರಾಜರಾಜೇಶ್ವರಿಯ ಉಲ್ಲೇಖ ಎರಡೂ ಇದೆ. ಅಷ್ಟಕ್ಕೂ ಶಕ್ತಿ ರೂಪಿಣಿಯಾದ ಆ ತಾಯಿ‌ಯೇ ಜಗದ ಹುಟ್ಟಿಗೆ‌ ಕಾರಣಳಾದ ಜಗದಂಬೆ, ಜಗಜ್ಜನನಿ, ಭವಾನಿ, ದುರ್ಗೆ, ರಾಜರಾಜೇಶ್ವರಿ, ಶಂಕರಿ, ಶಾಂಭವಿ, ಮಾನವ ಕುಲ‌ ಜನನಿಯಲ್ಲವೇ? ಔ/ಅಃ

Image in tweet by Samara Veera (ಸಮರವೀರ)

ಶಾರದಾ‌ ಸಹಸ್ರನಾಮದ ಈ ಉಲ್ಲೇಖ ನೋಡಿ, ಇದು ಭೈರವ -ಭೈರವಿಯರ ಸಂಭಾಷಣೆಯ ಶಾರದೆಯ ಸ್ತೋತ್ರ. ಈ ಸ್ತೋತ್ರವೇ ನಾವು ಮೊದಲಿಗೂ ನೋಡಿದ್ದು. ಇದು ಸ್ವತಃ ಭೈರವನ‌ ಮಾತಿನಲ್ಲಿ ಬರುವ ಮಾತುಗಳು. "..ಪರಾಪರ ರಹಸ್ಯಂ ಚ ಜಗತಾಂ ಭುವನೇಶ್ವರಿ." ಅಂ/ಅಃ

Image in tweet by Samara Veera (ಸಮರವೀರ)

ಇವತ್ತಿಗೆ ಇಷ್ಟು ಸಾಕು, ಇದನ್ನು ನಕಲಿಗಳು ಅರಗಿಸಿಕೊಂಡ ಮೇಲೆ ಇನ್ನೊಂದು ಸರಣಿ ಬರಲಿದೆ. ಅಲ್ಲಿಯವರೆಗೂ ಭುವನೇಶ್ವರಿಯ ಅಸ್ತಿತ್ವ ಪ್ರಶ್ನಿಸಿದ ಎಲ್ಲ ನಕಲಿ ಹೋರಾಟಗಾರರಿಗೂ ಇದು ತಲುಪಲಿ. ದೇವಿ ಭುವನೇಶ್ಬರಿಯ‌ ಉಲ್ಲೇಖ ಸಿಗುವುದು ನಮಗೆ ಸನಾತನ ಧರ್ಮದ ಮಂತ್ರ,ಸ್ತೋತ್ರಗಳಲ್ಲೇ. ಇದೇ ಹಿಂದೂ ಸಂಸ್ಕೃತಿ, ಈ ನೆಲದ ಮೂಲ‌ ಸಂಸ್ಕೃತಿ. ಅಃ/ಅಃ

References and Books: -Ashwayuja Masa, Rajalaxmi Gopal. -Karnatakada Devalayagalu, Shridatta Dixit -Shiva Rahasya, Transl by-Gangadhar Shatri - Mantra Mahodadhi - ಸಂಶೋಧನ*:ಪಾಂಡಿತ್ಯ ರಹಸ್ಯ , ಚಿದಾನಂದ ಮೂರ್ತಿ - Lalithopakaynam,Buraganahalli Bheemasena -ನಾಮ ಪಾರಾಯಣ ಸ್ತೋತ್ರಗಳು, S. Dixit

@samaraveera85 Can't see the thread.

@ijnani Why sir?

@samaraveera85 🙏🙏🙏

@samaraveera85 Fantastic thread 🙏

Share this thread

Read on Twitter

View original thread

Navigate thread

1/20